ಕರ್ನಾಟಕದ ಸ್ವಾತಂತ್ರ ಹೋರಾಟಗಾರರ ಹೆಸರು

ಕರ್ನಾಟಕದ ಸ್ವಾತಂತ್ರ ಹೋರಾಟಗಾರರ ಹೆಸರು ಏನೆಂದು ಕೇಳಿದರೆ ಇತ್ತೀಚಿನ ಮಕ್ಕಳಿಗೆ ಅದರ ಬಗ್ಗೆ ಅರಿವು ಇರುವುದಿಲ್ಲ ಇದಕ್ಕೆ ಮುಖ್ಯ ಕಾರಣ ನಮ್ಮ ಶಾಲಾ-ಕಾಲೇಜುಗಳಲ್ಲಿ ಇದರ ಬಗ್ಗೆ ಆಗಿಂದಾಗೆ ಮಾಹಿತಿಯನ್ನು ನೀಡುವುದಿಲ್ಲ ಕೇವಲ ಹೇಗೆ ಇಂಜಿನಿಯರಿಂಗ್ ಅಥವಾ ಡಾಕ್ಟರ್ ಪದವಿ ಪಡೆದು ಜೀವನದಲ್ಲಿ ಒಳ್ಳೆ ಸ್ಯಾಲರಿಯನ್ನು ಪಡೆಯಬೇಕು ಎಂದಷ್ಟೇ ಇತ್ತೀಚಿನ ಕಾಲದ ಮಾಸ್ಟರ್ ಅಥವಾ ಮೇಡಂ ಹೇಳಿಕೊಡುತ್ತಾರೆ ಶಾಲೆಯಲ್ಲಿ ಹಾಗೂ ನಮ್ಮ ಪೋಷಕರು ಸಹ ಸ್ವಾತಂತ್ರ ಹೋರಾಟದಲ್ಲಿ ಯಾರೆಲ್ಲಾ ತಮ್ಮ ಕೊಡುಗೆ ನೀಡಿದ್ದಾರೆ ಅವರ ಬಗ್ಗೆ ತಿಳಿದುಕೊಂಡಿರುವುದಿಲ್ಲ ಜೊತೆಗೆ ಎಷ್ಟು ತಿಳಿದಿದೆ ಅಷ್ಟು ವಿಷಯವನ್ನು ನಮ್ಮ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಏನಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಮ್ಮ ಮಕ್ಕಳಿಗೆ ನೀಡುವುದಿಲ್ಲ ಈ ಕಾರಣದಿಂದಾಗಿಯೇ ಇಂದಿನ ಪೀಳಿಗೆ ಇದರ ಬಗ್ಗೆ ಹೆಚ್ಚು ಗಮನವನ್ನು ಹರಿಸುತ್ತಿಲ್ಲ ಈ ಕಾರಣದಿಂದಾಗಿಯೇ ನಾವು ನಿಮಗೆ ನಮ್ಮ ಆರ್ಟಿಕಲ್ ನಲ್ಲಿ ನಮ್ಮ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಏನೆಂದು ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ.
ಕಿತ್ತೂರ ಚೆನ್ನಮ್ಮ
ಸಂಗೊಳ್ಳಿ ರಾಯಣ್ಣ
ಟಿಪ್ಪು ಸುಲ್ತಾನ್
ಕಮಲಾದೇವಿ ಚಟ್ಟೋಪಾಧ್ಯಾಯ
ನಿಟ್ಟೂರು ಶ್ರೀನಿವಾಸ್
ಕಾರ್ನಾಡ್ ಸದಾಶಿವ

ಕಿತ್ತೂರ ರಾಣಿ ಚೆನ್ನಮ್ಮ ಒಬ್ಬ ಮಹಿಳೆಯಾಗಿದ್ದರು ಈಕೆ 1778 ಅಕ್ಟೋಬರ್ 23ರಂದು ಜನಿಸಿದರು ಈಕೆ ಕಿತ್ತೂರಿನ ರಾಣಿಯಾಗಿದ್ದು ಬಹಳ ಕಾಲದವರೆಗೆ ಕಿತ್ತೂರು ಸಾಮ್ರಾಜ್ಯವನ್ನು ಬ್ರಿಟಿಷರಿಂದ ರಕ್ಷಿಸಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ಅವರ ಪತಿ ಮರಣ ಹೊಂದಿದ ಮೇಲೆ ಸಾಮ್ರಾಜ್ಯದ ಹೊಣೆ ಇವರಿಗೆ ಸಿಕ್ಕಿತು ಆದ್ದರಿಂದ ತನ್ನ ಜನರನ್ನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಕಿತ್ತೂರು ರಾಣಿ ಚೆನ್ನಮ್ಮ ಹಲವು ಬಾರಿ ಯುದ್ಧ ಸಹ british ಸಾಮ್ರಾಜ್ಯದ ವಿರುದ್ಧ ಮಾಡಿದರು ಹಾಗಾಗಿಯೇ ಇವರನ್ನ ಇತ್ತೀಚಿನ ಜನರು ಯಾರನ್ನೇ ಕೇಳಿದರೂ ಸಹ ಕಿತ್ತೂರು ರಾಣಿ ಚೆನ್ನಮ್ಮ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೇಳುತ್ತಾರೆ ಈಕೆ ಲಿಂಗಾಯಿತ ಪಂಚಮಸಾಲೆ ಸಮುದಾಯಕ್ಕೆ ಸೇರಿದವರಾಗಿದ್ದರು ಈಕೆ ಕುದುರೆ ಸವಾರಿ, ಫೈಟಿಂಗ್, ಬಿಲ್ಲು ಬಾಣ ಮುಂತಾದ ವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದರು. ಈಕೆಯ ಪತಿ ರಾಜ ಮಲ್ಲ ಸರ್ಜಾ ಮರಣ ಹೊಂದಿದ ಮೇಲೆ ರಾಜ್ಯದ ಸಮಸ್ತ ಹೊಣೆಗಾರಿಕೆ ಇವರಿಗೆ ಸಿಕ್ಕಿತು ಹಾಗಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಈಕೆಯ ಜನರನ್ನ ರಕ್ಷಿಸುವ ಉದ್ದೇಶದಿಂದ ಈಕೆ ಹಲವು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ತನ್ನ 15ನೇ ವಯಸ್ಸಿನಲ್ಲಿ ಈಕೆ ಮಲ್ಲಸರ್ಜನನ್ನ ಮದುವೆಯಾಗಿದ್ದರು ಇವರಿಗೆ ಒಂದು ಮಗು ಸಹ ಇದ್ದು ಅದು ಕಾಯಿಲೆಯಿಂದ ಖುತ್ತಾಗಿ ತುಂಬಾ ಚಿಕ್ಕವಯಸ್ಸಿನಲ್ಲಿ ಮರಣ ಹೊಂದಿದ್ದು ಹಾಗಾಗಿ ಇವರಿಗೆ ಯಾವ ಮಕ್ಕಳು ಸಹ ಇರಲಿಲ್ಲ, 50 ವರ್ಷಗಳ ಕಾಲ ತುಂಬಾ ಒಳ್ಳೆಯ ಜೀವನವನ್ನು ನಡೆಸಿ 1829 ರಲ್ಲಿ ಮರಣ ಹೊಂದಿದರು ನೀವು ಗಮನಿಸಿದರೆ ತಿಳಿಯುತ್ತೆ ನಮ್ಮ ಬೆಂಗಳೂರು ಮೈಸೂರು ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಇವರ ಪುತ್ತಳಿಯನ್ನ ನೀವು ನೋಡಬಹುದು.

ಸಂಗೊಳ್ಳಿ ರಾಯಣ್ಣ
ನಮ್ಮ ಕರ್ನಾಟಕದ ಸ್ವತಂತ್ರ ಹೋರಾಟಗಾರರ ತರದಿಯಲ್ಲಿ ಸಂಗೊಳ್ಳಿ ರಾಯಣ್ಣ ಅವರು ತುಂಬಾ ಮುಖ್ಯವಾದ ಪಾತ್ರವನ್ನ ನಿರ್ವಹಿಸಿದ್ದಾರೆ ಇವರು ಹುಟ್ಟಿದ್ದು ಆಗಸ್ಟ್ 15, 1798. ಕಿತ್ತೂರ ಚೆನ್ನಮ್ಮ ಮರಣ ಹೊಂದಿದ ಮೇಲೆ ಅವರಿಗೆ ಮಗು ಇರಲಿಲ್ಲ ಈ ಕಾರಣದಿಂದಾಗಿಯೇ ಅವರ ಸೇನೆಯ ಮುಖ್ಯಸ್ಥರಾಗಿದ್ದ ಸಂಗೊಳ್ಳಿ ರಾಯಣ್ಣ ಅವರು ಕಿತ್ತೂರಿನ ಉಳಿವಿಗಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹಲವು ರೀತಿಯ ಯುದ್ಧಗಳನ್ನು ಮಾಡಿದರು ಈ ಕಾರಣದಿಂದಾಗಿಯೇ ಬೆಳಗಾವಿಯ ಜನ ಇವರನ್ನ ಈಗಲೂ ಕೂಡ ಕೊಂಡಾಡುತ್ತಾರೆ ತಮ್ಮ 33ನೇ ವಯಸ್ಸಿನಲ್ಲಿ ಈತ ಮರಣ ಹೊಂದಿದರು, ಕುರುಬ ಸಮಾಜಕ್ಕೆ ಸೇರಿದ್ದ ಈತ ಹಲವು ಕಾಣಿಕೆಯನ್ನು ನಮ್ಮ ಈಗಿನ ಪೀಡಿಕೆಗೆ ನೀಡಿದ್ದಾರೆ ಹಾಗೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಮಹಾನ್ ಯೋಧ ಎಂಬ ಹೆಸರನ್ನು ಸಹ ಈತ ಪಡೆದಿದ್ದಾರೆ ಇವರನ್ನ ಬೆಳಗಾವಿಯಲ್ಲಿ ನೇಣು ಹಾಕಲಾಯಿತು ಇದಕ್ಕೆ ಮುಖ್ಯ ಕಾರಣ ಬ್ರಿಟಿಷರ ವಿರುದ್ಧ ಇವರು ಹಲವು ಬಾರಿ ಹೋರಾಟ ನಡೆಸಿದರು ಈ ಕಾರಣದಿಂದಾಗಿಯೇ ಇವರನ್ನ ಸೆರೆ ಹಿಡಿಯಲಾಯಿತು ಆದರೂ ಸಹ ಬಹಳ ನಿಪುಣನಾಗಿದ್ದ ಸಂಗೊಳ್ಳಿ ರಾಯಣ್ಣ ಜೈಲಿನಿಂದ ಪರಾರಿಯಾಗಿದ್ದರು ಆದರೂ ಸಹ ನಮ್ಮ ಭಾರತದ ಕೆಲವು ಜನರು ಇವರನ್ನ ಮತ್ತೆ ಸೆರೆಹಿಡಿದು ಜೈಲಿನಲ್ಲಿ ಇಡಲು ಸಹಕಾರಿಯಾದರು ಈ ಕಾರಣದಿಂದಾಗಿಯೇ ಇವರು ತಮ್ಮ 33ನೇ ವಯಸ್ಸಿನಲ್ಲಿ ಜನವರಿ 26ರಂದು ಮರಣ ಹೊಂದಿದರು ಇವರು ಮರಣ ಹೊಂದಿ ಈಗಾಗಲೇ 200 ವರ್ಷ ಕಳೆದಿವೆ ಆದರೂ ಸಹ ಇವರ ಪ್ರಖ್ಯಾತಿಯೇನು ಕಡಿಮೆಯಾಗಿಲ್ಲ ಇತ್ತೀಚಿಗೆ ನಮ್ಮ ಕನ್ನಡದಲ್ಲಿ ಒಂದು ಸಿನಿಮಾ ವನ್ನ ತೆಗೆಯಲಾಯಿತು ಆ ಸಿನಿಮಾದ ಹೆಸರು ಸಂಗೊಳ್ಳಿ ರಾಯಣ್ಣ ಮುಖ್ಯ ಪಾತ್ರದಲ್ಲಿ ದರ್ಶನ್ ನಟಿಸಿದ್ದರು ಈ ಸಿನಿಮಾ ಗೆ ಒಟ್ಟು 50 ಕೋಟಿ ಬಜೆಟ್ ನಿಂದ ನಿರ್ಮಾಣ ಮಾಡಲಾಯಿತು ಹಾಗೂ ಸಿನಿಮಾ ಒಟ್ಟು ಗಳಿಸಿದ್ದು 150 ಕೋಟಿ ಇದರಿಂದ ತಿಳಿಯುತ್ತೆ ನಮ್ಮ ಕರ್ನಾಟಕದ ಜನರು ಈಗಲೂ ಸಹ ಸಂಗೊಳ್ಳಿ ರಾಯಣ್ಣನ ಮರೆತಿಲ್ಲ ತುಂಬಾ ಪ್ರಭಾವಿ ಹೋರಾಟಗಾರರಾಗಿದ್ದ ಇವರನ್ನ ನಾವು ಖಂಡಿತ ಸ್ಮರಿಸಲೇಬೇಕು.

ಟಿಪ್ಪು ಸುಲ್ತಾನ್
ಟಿಪ್ಪು ಸುಲ್ತಾನ್ ಬಗ್ಗೆ ಕೆಲವರಿಗೆ ತಪ್ಪು ಅಭಿಪ್ರಾಯಗಳಿವೆ ಇದಕ್ಕೆ ಮುಖ್ಯ ಕಾರಣ ಇವರು ಮುಸ್ಲಿಂ ಆಗಿದ್ದರು ಹಾಗೂ ಭಾರತ ಸ್ವತಂತ್ರ ಪಡೆಯಬೇಕು ಎಂಬ ಉದ್ದೇಶದಿಂದ ಇವರು ಹೋರಾಟ ನಡೆಸಿಲ್ಲ ತನ್ನ ಆಸ್ಥಾನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಮಾತ್ರ ಇವರು ಹೋರಾಟ ಮಾಡಿದ್ದಾರೆ ಹಾಗಾಗಿ ಇವರು ಸ್ವತಂತ್ರ ಹೋರಾಟಗಾರರಲ್ಲ ಎಂದು ಹಲವು ಜನರು ಈಗಲೂ ಸಹ ಹೇಳುತ್ತಾರೆ ಆದರೆ ಬ್ರಿಟಿಷರ ವಿರುದ್ಧ ಇವರು ಹೋರಾಟ ನಡೆಸಿದ್ದಾರೆ ಎಂಬುದಂತೂ ನಿಜ ಈ ಕಾರಣದಿಂದಾಗಿ ಇವರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ನಾವು ಇಟ್ಟುಕೊಳ್ಳಲೇಬೇಕು ಇದಕ್ಕೆ ಮುಖ್ಯ ಕಾರಣ ಬ್ರಿಟಿಷರ ವಿರುದ್ಧ ಎರಡು ಬಾರಿ ಆಂಗ್ಲೋ ಹೋರಾಟವನ್ನು ಇವರು ನಡೆಸಿದ್ದಾರೆ ಒಂದು ಹೋರಾಟದಲ್ಲಿ ಸೋತ ಇವರು ತನ್ನ ಮಕ್ಕಳನ್ನೇ ಪಣಕ್ಕಿಟ್ಟು ಹಣ ತಂದು ಮೂರನೇ ಆಗ್ಲೋ ಹೋರಾಟವನ್ನು ನಡೆಸಿದರು ಇದರಲ್ಲಿ ಸೋತ ಟಿಪ್ಪು ಸುಲ್ತಾನ್ ಮರಣ ಹೊಂದಿದರು. ಈತ ಹುಟ್ಟಿದ್ದು ದೇವನಹಳ್ಳಿಯಲ್ಲಿ ಕೇವಲ 47 ವರ್ಷ ಬದುಕಿದ್ದ ಟಿಪ್ಪು ಸುಲ್ತಾನ್ ಈಗ ಒಂದು ದಂತಕಥೆ 1799 ಎರಡನೇ ಆಂಗ್ಲೋ ಹೋರಾಟದಲ್ಲಿ ಇವರು ಮರಣ ಹೊಂದಿದರು ಹಿತ ಮೈಸೂರಿನ ಅರಸ ಸಹ ಆಗಿದ್ದರು ಇವರ ತಂದೆ ಹೈದರ್ ಅಲಿ ಮೂಲತಃ ಪಾಕಿಸ್ತಾನದಿಂದ ಬಂದಿದ್ದರು ನಮ್ಮ ಕರ್ನಾಟಕಕ್ಕೆ ನಂತರ ಮೈಸೂರಿನ ಸಾಮ್ರಾಜ್ಯದ ಅರಸರಾಗಿ ಈತನು ಸಹ ಹಲವು ಹೋರಾಟವನ್ನು ಬ್ರಿಟಿಷರ ವಿರುದ್ಧ ಮಾಡಿದ್ದಾರೆ ಈ ಕಾರಣದಿಂದಾಗಿಯೇ ಇವರನ್ನ ಕರ್ನಾಟಕದ ಹೋರಾಟಗಾರರು ಎಂದು ಹಲವು ಜನರು ಕರೆಯುತ್ತಾರೆ ಹಾಗಾಗಿ ಇವರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ನಾವು ಇಟ್ಟುಕೊಳ್ಳೋಣ.