ಕಷ್ಟ ಪರಿಹಾರ ಮಂತ್ರ : ನಾವು ಯಾವ ಸಂತೋಷದ ಆಚರಣೆಯನ್ನ ಪ್ರಾರಂಭಿಸಿದರು ಮೊದಲು ಪೂಜಿಸುವುದು ಗಣಪನಿಗೆ, ನಿಮಗೆ ಈಗಾಗಲೇ ಗೊತ್ತಿದೆ ಗಣಪನು ಸಂಕಷ್ಟ ನಿವಾರಕ ಯಾವುದೇ ಸಂಭ್ರಮಾಚರಣೆ ಪ್ರಾರಂಭಿಸುವುದಕ್ಕಿಂತ ಮುಂಚೆ ಗಣೇಶನಿಗೆ ವಿಶೇಷ ಪೂಜೆ ಅರ್ಪಿಸಿ ನಂತರ ಕೆಲಸವನ್ನ ನಮ್ಮ ಹಿಂದುಗಳು ಬಹಳ ಹಿಂದಿನ ಕಾಲದಿಂದ ಮಾಡಿಕೊಂಡು ಬಂದಿರುವ ಆಚರಣೆ, ಹೀಗಾಗಿ ನೀವು ಕೂಡ ತಮ್ಮ ಕಷ್ಟದ ಸಮಯದಲ್ಲಿ ಕೆಲವು ಗಣಪತಿಯ ಮಂತ್ರಗಳನ್ನ ಜಪಿಸಿಕೊಂಡು ಮನಸ್ಸಿಗೆ ನೆಮ್ಮದಿ ಹಾಗೂ ಆತ್ಮವಿಶ್ವಾಸವನ್ನ ಪಡೆದುಕೊಳ್ಳಬಹುದು.
ಗಣಪತಿ ಮಂತ್ರ
|| ವಕ್ರತುಂಡ ಮಹಾಕಾಯ ||
|| ಕೋಟಿ ಸೂರ್ಯ ಸಮಪ್ರಭ ||
ನಿರ್ವಿಘ್ನಂ ಕುರುಮೆ ದೇವ ||
|| ಸರ್ವ ಕಾರ್ಯೇಷು ಸರ್ವದ ||
ಸರಸ್ವತಿ ದೇವಿಯ ಮಂತ್ರ
ನಿಮಗೆ ಗೊತ್ತು ಸರಸ್ವತಿ ತಾಯಿಯನ್ನ ಬುದ್ದಿವಂತಿಕೆ ವಿದ್ಯೆ ನೀಡಲಿ ಎಂದು ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಮಂತ್ರ ಪಠಣ ಮಾಡಲಾಗುತ್ತೆ ಈ ತಾಯಿಯನ್ನ ಚಿಂತೆಯನ್ನು ದೂರ ಮಾಡಲು ಸಹ ಕೆಲವು ಮಂತ್ರಗಳನ್ನು ಜಪಿಸಿ ಮನಸ್ಸಿಗೆ ಆನಂದ ಹಾಗೂ ಧೈರ್ಯವನ್ನ ನೀವು ಪಡೆದುಕೊಳ್ಳಬಹುದು ಹಲವು ಸಮಸ್ಯೆಗಳಿಗೆ ಪರಿಹಾರವನ್ನ ಸಹ ಈ ಮಂತ್ರವನ್ನು ಪಠಿಸುವುದರ ಮೂಲಕ ನೀವು ಪಡೆದುಕೊಳ್ಳಬಹುದು ಹಾಗಾಗಿ ಪ್ರತಿದಿನ ಸರಸ್ವತಿ ದೇವಿಯ ಈ ಮಂತ್ರವನ್ನು ತಮ್ಮ ಮನಸ್ಸಿನಲ್ಲಿ ಖಂಡಿತ ನೀವು ಜಪಿಸಿ.
|| ಓಂ ಶಾರದಾ ಮಾತಾ ||
|| ಈಶ್ವರೀ ಮೈಂ ನಿತ ಸುಮರಿ ||
|| ತೋಯ ಹಾಥ ಜೋಢ್ ||
ಶಿವನ ಮಂತ್ರ
ಕಷ್ಟದ ಸಮಯದಲ್ಲಿ ಶಿವನನ್ನ ಎರಡು ನಿಮಿಷ ನೆನೆದರೆ ಸಾಕು ಇರುವ ಕಷ್ಟವನ್ನೆಲ್ಲ ದೂರ ಮಾಡುತ್ತಾನೆ ಎಲ್ಲಾ ಗ್ರಹಗಳನ್ನು ಸಹ ತೊಂದರೆಗಳಿಂದ ಹಲವು ಬಾರಿ ಶಿವನು ದೂರ ಇಟ್ಟಿದ್ದಾನೆ ಹಾಗಾಗಿ ನಿಮಗೆ ಈಗ ಬಂದಿರುವ ಸಣ್ಣಪುಟ್ಟ ಸಮಸ್ಯೆಯನ್ನು ಖಂಡಿತ ಶಿವ ಈಡೇರಿಸಲಿದ್ದಾನೆ ಹಾಗಾಗಿ ಈ ಪಂಚಾಕ್ಷರಿ ಮಂತ್ರವನ್ನ ಪ್ರತಿನಿತ್ಯ ಮನಸ್ಸಿನಲ್ಲಿ ಸಮಯ ಸಿಕ್ಕಾಗ ಜಪಿಸಿ.
| ಓಂ ವಾಗ್ದೈವ್ಯೈ ಚ ವಿದ್ಮಹೇ |
| ಕಾಮರಾಜಾಯ ಧೀಮಹಿ |
| ತನ್ನೋ ದೇವಿ ಪ್ರಚೋದಯಾತ್ |
ಬ್ರಹ್ಮ ಮಂತ್ರ
ಹಲವು ಜನರು ಬ್ರಹ್ಮದೇವರನ್ನ ಪೂಜಿಸುವುದಿಲ್ಲ ಇದಕ್ಕೆ ಹಲವು ಕಥೆಗಳು ಕಾರಣಗಳು ನಿಮಗೆಲ್ಲ ಗೊತ್ತೇ ಇದೆ ಹಾಗಾಗಿ ನೀವೇನಾದರೂ ಕೆಲವು ಬ್ರಹ್ಮದೇವರ ಸ್ತೋತ್ರಗಳನ್ನ ಮನಸ್ಸಿನಲ್ಲಿ ಹೇಳುತ್ತಾ ಬಂದರೆ ಸಣ್ಣಪುಟ್ಟ ತೊಂದರೆಗಳು ದೂರ ಆಗಿ ಆರ್ಥಿಕ ಸಮಸ್ಯೆ ಕೂಡ ನಿಮ್ಮನ್ನು ಕಾಡುವುದಿಲ್ಲ ಹಾಗಾಗಿ ಈ ಸ್ತೋತ್ರವನ್ನು ನಿಮಗೋಸ್ಕರ ನೀಡುತ್ತಿದ್ದೇವೆ ಖಂಡಿತ ನೀವು ಜಪಿಸಬಹುದು. ಹಲವು ಪುರಾಣ ಕಥೆಗಳಲ್ಲಿ ಏಕೆ ಬ್ರಹ್ಮ ದೇವರನ್ನ ಪೂಜಿಸಬಾರದು ಎಂಬುದರ ಬಗ್ಗೆ ಸಾಕಷ್ಟು ಮಾಹಿತಿ ಹಾಗೂ ಕಥೆ ನಿಮಗೆಲ್ಲ ಗೊತ್ತೇ ಇದೆ ಹಾಗಾಗಿ ಕೆಲವು ಜನರು ಬ್ರಹ್ಮದೇವರನ್ನು ಪೂಜೆ ಮಾಡುವುದಕ್ಕೆ ಹೋಗೋದಿಲ್ಲ.
| ಶಾರದಾ ಶಾರದಾಂಭೌಜವದನಾ |
| ವದನಾಂಬುಜೇ |
| ಸರ್ವದಾ ಸರ್ವದಾಸ್ಮಾಕಮಂ |
| ಸನ್ನಿಧಿಮಂ ಸನ್ನಿಧಿಮಂ ಕ್ರಿಯಾತ್ |
ಮಹಾ ಕಾಳಿ ಮಂತ್ರ
ಮಹಾಕಾಳಿಯನ್ನ ಪ್ರತಿ ಊರಿನಲ್ಲೂ ಹಲವು ಜನರು ಪೂಜಿಸಿಕೊಂಡು ಬಂದಿದ್ದಾರೆ ಹಲವು ಖಾಯಿಲೆಗಳನ್ನ ನಿವಾರಣೆ ಮಾಡುತ್ತಾಳೆ ಎಂಬ ನಂಬಿಕೆ ಪುರಾತನ ಕಾಲದಿಂದಲೂ ನಮ್ಮಲ್ಲಿದೆ ಈ ಕಾರಣದಿಂದಾಗಿಯೇ ಪ್ರತಿ ಊರಿನಲ್ಲೂ ಕಾಲಿಯ ದೇವಸ್ಥಾನ ಇರುತ್ತೆ ಸಣ್ಣಪುಟ್ಟ ಕಾಯಿಲೆಗಳು ಮಕ್ಕಳಿಗೆ ಬಂದಾಗ ಕಾಳಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತಾರೆ ಹಾಗೂ ಕಾಯಿಲೆಗೆ ತಮ್ಮ ಮನೆಯಲ್ಲೇ ಔಷಧಿಯನ್ನು ಸಹ ಮಹಾ ಕಾಳಿಯನ್ನು ನೆನೆದು ಪಡೆದುಕೊಳ್ಳುತ್ತಾರೆ ಈ ರೀತಿ ಮಾಡುವುದರಿಂದ ಮನುಷ್ಯರಂತೆ ಹಾಗೂ ರೋಗ ಮುಕ್ತಿಯನ್ನು ಸಹ ಹಲವು ಜನರು ಈಗಾಗಲೇ ಪಡೆದುಕೊಂಡಿದ್ದಾರೆ.
ಮಕ್ಕಳು ಸರಸ್ವತಿಯನ್ನ ಬುದ್ಧಿ ಹಾಗೂ ಜ್ಞಾನವನ್ನು ಪಡೆದುಕೊಳ್ಳಲು ಪ್ರತಿನಿತ್ಯ ಶಾಲೆ-ಕಾಲೇಜುಗಳಲ್ಲಿ ಪಠಿಸುತ್ತಾರೆ ಈ ರೀತಿ ಪೂಜಿಸಬೇಕು ಎಂಬ ನಿಯಮವನ್ನೇನಿಲ್ಲ ಮನಸ್ಸಿನಲ್ಲಿ ಕೇವಲ ಜಪಿಸಿದರೆ ಸಾಕು ಸರಸ್ವತಿ ದೇವಿಯು ತಮಗೆ ಒಲಿಯುತ್ತಾಳೆ, ವಿದ್ಯಾ ಬುದ್ಧಿಯನ್ನ ಸರಾಗವಾಗಿ ನೀಡುತ್ತಾಳೆ ಎಂಬ ಭಾವನೆ ನಮ್ಮಲ್ಲಿ ಇದೆ ಹಾಗಾಗಿ ಪ್ರತಿ ಶಾಲೆಯಲ್ಲೂ ಸಹ ಬೆಳಿಗ್ಗೆ ಸರಸ್ವತಿ ದೇವಿಯ ಮಂತ್ರವನ್ನ ಜಪಿಸಲಾಗುತ್ತೆ ಇದು ತುಂಬಾ ಪ್ರಯೋಜನ ಕಾರಿ ಸಹ ಆಗಿದೆ.
ಪರೀಕ್ಷೆ ಎಂಬ ಸುದ್ದಿ ಕೇಳಿದರೆ ಹಲವು ಜನರಲ್ಲಿ ಭಯ ಉಂಟಾಗುತ್ತದೆ ಹಗಲು ರಾತ್ರಿ ಎನ್ನದೆ ಹಲವು ಮಕ್ಕಳು ಓದುತ್ತಾರೆ ಆದರೆ ಎಕ್ಸಾಮಲ್ಲಿ ಉತ್ತಮ ಅಂಕಗಳನ್ನು ಪಡೆಯಲು ವಿಫಲಗೊಳ್ಳುತ್ತಾರೆ ಇದಕ್ಕೆ ಹಲವು ಕಾರಣಗಳಿವೆ ಮುಖ್ಯವಾಗಿ ಮಾನಸಿಕ ಒತ್ತಡ ಕಾನ್ಫಿಡೆನ್ಸ್ ಇಲ್ಲದೆ ಇರುವ ಕಾರಣ ಮಕ್ಕಳು ಎಷ್ಟೇ ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸಿದರು ಅಂಕಗಳನ್ನು ಮಾತ್ರ ಕಡಿಮೆ ತೆಗೆದುಕೊಳ್ಳುತ್ತಿದ್ದಾರೆ ಇದನ್ನ ನಿವಾರಿಸಿಕೊಳ್ಳಲು ಹಲವು ಸರಸ್ವತಿಯ ಮಂತ್ರಗಳನ್ನ ಪ್ರತಿನಿತ್ಯ ಜಪಿಸಿದರೆ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತೆ ಜೊತೆಗೆ ಸರಸ್ವತಿ ಆಶೀರ್ವಾದವನ್ನು ಸಹ ನೀವು ಪಡೆದುಕೊಳ್ಳುತ್ತೀರಾ ಹಾಗಾಗಿ ಪ್ರತಿನಿತ್ಯ ಸರಸ್ವತಿ ದೇವಿಗೆ ಹಳದಿ ಬಣ್ಣದ ಅಕ್ಷತೆಯನ್ನು ಹಾಕಿ ಹೂಗಳನ್ನ ಸಮರ್ಪಿಸಿ ದೀಪವನ್ನು ಬೆಳಗುತ್ತಾ ಕೆಲವು ಸ್ತೋತ್ರಗಳನ್ನ ನೀವು ಜಪಿಸಿದರೆ ತುಂಬಾ ಜ್ಞಾಪಕ ಶಕ್ತಿ ಹೆಚ್ಚಾಗುತ್ತೆ ಜೊತೆಗೆ ಏಕಾಗ್ರತೆ ಕೂಡ ನಿಮ್ಮಲ್ಲಿ ಬರುತ್ತದೆ ನಾವು ಈ ಕೆಳಗೆ ಹಲವು ಸ್ತೋತ್ರಗಳನ್ನು ನೀಡಿದ್ದೇವೆ ಇವುಗಳನ್ನ ಪ್ರತಿನಿತ್ಯ ಜಪಿಸಿ ಒಳ್ಳೆಯದಾಗುತ್ತೆ.
| ಓಂ ಸರಸ್ವತ್ಯೈ |
| ವಿದ್ಮಹೇ ಬ್ರಹ್ಮಪುತ್ರಾಯೈ ಧೀಮಹಿ |
| ತನ್ನೋ ದೇವಿ ಪ್ರಚೋದಯಾತ್ |