27 ರಾಶಿ ನಕ್ಷತ್ರಗಳ ಹೆಸರುಗಳು | ಯಾರ ಜೊತೆ ಮದುವೆ ಆದರೆ ಒಳ್ಳೇದು

27 ರಾಶಿ ನಕ್ಷತ್ರಗಳ ಹೆಸರು : ಮಗು ಹುಟ್ಟಿದ ತಕ್ಷಣ ನಮಗೆಲ್ಲ ನೆನಪಿಗೆ ಬರುವುದು ಯಾವ ನಕ್ಷತ್ರ ಲಗ್ನ ರಾಶಿ ಜನ್ಮ ಕುಂಡಲಿಯಲ್ಲಿ ಮಗು ಹುಟ್ಟಿದೆ ಎಂದು ನೋಡಿಸುತ್ತಾರೆ ಹುಟ್ಟು 27 ನಕ್ಷತ್ರಗಳು ಈಗ ಇವೆ ಈ ನಕ್ಷತ್ರಗಳು ಮನುಷ್ಯನಿಗೆ ಒಂದೊಂದು ರೀತಿಯಲ್ಲಿ ಪರಿಣಾಮವನ್ನು ಬೀರುತ್ತೆ ಹಾಗೂ ಯಾವ ಸಮಯದಲ್ಲಿ ಮಗು ಹುಟ್ಟಿದೆ ಅದನ್ನ ನೋಡಿ ಜಾತಕ ನಕ್ಷತ್ರ ರಾಶಿಯನ್ನ ಗುರುತಿಸಲಾಗುತ್ತದೆ. 4 ಪಾದಗಳು ಒಂದು ನಕ್ಷತ್ರದಲ್ಲಿ ಇರುತ್ತವೆ. ಒಟ್ಟು 27 ನಕ್ಷತ್ರಗಳಿಗೂ ಗ್ರಹ ಒಬ್ಬ ಅಧಿಪತಿಯಾಗಿರುತ್ತಾನೆ. ಅದೇ ರೀತಿ ನಮ್ಮ ಪೂರ್ವಜರು ನಕ್ಷತ್ರಕ್ಕೊಂದು ಪ್ರಾಣಿಯನ್ನು ಗುರುತಿಸಿದ್ದಾರೆ ನಕ್ಷತ್ರಗಳಿಗೆ ಒಂದು ಪ್ರಾಣಿಯನ್ನ ಗುರುತಿಸಿದ್ದಾರೆ ಹಾಗಾಗಿ ಆ ನಕ್ಷತ್ರದಲ್ಲಿ ಹುಟ್ಟಿರುವವರು ಆ ಪ್ರಾಣಿಯ ಗುಣವನ್ನು ಹೊಂದಿರುತ್ತಾರೆ ಎಂಬುದು ನಾವೆಲ್ಲ ನಂಬಿರುವ ಸತ್ಯ ಕೆಲವರನ್ನ ನಾವು ಗಮನಿಸಿದ್ದೇವೆ ಅವರ ಹಾವಭಾವಗಳು ಆ ಪ್ರಾಣಿಯಂತೆ ಇರುತ್ತವೆ.
ಈಗ ನಾವು ಯಾವೆಲ್ಲ ನಕ್ಷತ್ರಗಳು ಯಾವ ಪ್ರಾಣಿಯನ್ನ ಹೆಸರಿಡಿದು ಕರೆಯುತ್ತಿದ್ದೇವೆ ಎಂಬುದನ್ನ ತಿಳಿದುಕೊಳ್ಳೋಣ.

ಅಷ್ವಿನಿ ನಕ್ಷತ್ರ | ಕೇತು | ಗಂಡು ಕುದುರೆ
ಭರಣಿ ನಕ್ಷತ್ರ | ಶುಕ್ರ | ಗಂಡು ಆನೆ
ಕೃತಿಕಾ ನಕ್ಷತ್ರ | ಸೂರ್ಯ| ಹೆಣ್ಣು ಮೇಕೆ
ರೋಹಿಣಿ | ಚಂದ್ರ | ಸರ್ಪ
ಮೃಗಶಿರ | ಕುಜ | ಸರ್ಪ
ಅರಿದ್ರ | ರಾಹು | ನಾಯಿ
ಪುನರ್ವಸು | ಗುರು | ಬೆಕ್ಕು
ಪುಷ್ಯ-ಶನಿ-ಗಂಡು ಮೇಕೆ
ಆಶ್ಲೇಷ | ಬುಧ | ಬೆಕ್ಕು
ಮಘಾ | ಕೇತು | ಇಲಿ
ಪೂರ್ವಫಾಲ್ಗುಣಿ | ಶುಕ್ರ | ಇಲಿ
ಉತ್ತರಫಾಲ್ಗುಣಿ | ಸೂರ್ಯ | ಗೂಳಿ
ಹಸ್ತ | ಚಂದ್ರ | ಎಮ್ಮೆ
ಚಿತ್ರ | ಕುಜ | ಹುಲಿ
ಸ್ವಾತಿ | ರಾಹು | ಎಮ್ಮೆ
ವಿಶಾಖ | ಗುರು | ಹುಲಿ
ಅನುರಾಧ | ಶನಿ | ಜಿಂಕೆ
ಜ್ಯೇಷ್ಠ | ಬುಧ | ಜಿಂಕೆ
ಮೂಲ | ಕೇತು | ನಾಯಿ
ಪೂರ್ವಾಷಾಡ | ಶುಕ್ರ | ಕೋತಿ
ಉತ್ತರಾಷಾಡ | ಸೂರ್ಯ | ಮುಂಗುಸಿ
ಶ್ರವಣ | ಚಂದ್ರ | ಕೋತಿ
ಧನಿಷ್ಠ | ಕುಜ | ಹೆಣ್ಣು ಸಿಂಹ
ಶತಭಿಷ | ರಾಹು | ಹೆಣ್ಣು ಕುದುರೆ
ಪೂರ್ವಭಾದ್ರಪದ | ಗುರು | ಗಂಡು ಸಿಂಹ
ಉತ್ತರಭಾದ್ರಪದ | ಶನಿ | ಹಸು
ರೇವತಿ | ಬುಧ | ಹೆಣ್ಣು ಆನೆ

ಯಾವ ನಕ್ಷತ್ರದವರನ್ನ ಯಾರು ಮದುವೆ ಆದರೆ ತುಂಬಾ ಒಳ್ಳೆಯದಾಗುತ್ತೆ ನಕ್ಷತ್ರ ಮತ್ತು ಹೆಸರುಗಳು ನಕ್ಷತ್ರಗಳ ಹೆಸರು ಇವನ್ನ ನೀವು ತಿಳಿದುಕೊಳ್ಳಲು ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ.

ನಮಗೆಲ್ಲ ಗೊತ್ತು ಕೆಲವು ಪ್ರಾಣಿಗಳು ಇನ್ನೂ ಕೆಲವು ಪ್ರಾಣಿಗಳನ್ನ ಕಂಡರೆ ಆಗುವುದಿಲ್ಲ ಅದೇ ರೀತಿ ನಕ್ಷತ್ರಗಳಲ್ಲೂ ಸಹ ಈ ರೀತಿಯ ವಿಂಗಡಣೆಯನ್ನ ಮಾಡಲಾಗಿದೆ. ಯಾರೆಲ್ಲ ಮದುವೆಯ ಜೋಡಿಯನ್ನ ಹೊಂದಾಣಿಕೆ ಮಾಡುತ್ತಾರೆ ಆಗ ಕೆಲವು ಪ್ರಾಣಿ ನಕ್ಷತ್ರವನ್ನು ಹೊಂದಿರುವ ರಾಶಿಯವರಿಗೆ ಮದುವೆ ಮಾಡಬಾರದು ಅಕಸ್ಮಾತ್ ಏನಾದರೂ ಮಾಡಿದರೆ ಜಗಳ ಕೋಪ ಡೈವರ್ಸ್ ಸಹ ಆಗಬಹುದು ಅವುಗಳು ಈ ಕೆಳಕಂಡಂತಿವೆ.
ಈ ಕೆಳಕಂಡ ನಕ್ಷತ್ರಗಳು ಅಥವಾ ಪ್ರಾಣಿ ಹೊಂದಿರುವ ಜೋಡಿಗಳಿಗೆ ಮದುವೆಯನ್ನು ಮಾಡಬಾರದು ಈ ರೀತಿ ಮಾಡಿದರೆ ಜೀವನ ಸರಿಯಾಗಿ ನಡೆಯೋದಿಲ್ಲ ಅನ್ಯೂನ್ಯತೆಯಿಂದ ಜೀವನ ನಡೆಸುವುದಕ್ಕೆ ಆಗೋದಿಲ್ಲ.

ಹಸು & ಹುಲಿ
ಬೆಕ್ಕು & ಇಲಿ
ಆನೆ & ಸಿಂಹ
ಕೋತಿ & ಮೇಕೆ
ಕುದುರೆ & ಎಮ್ಮೆ
ಹಾವು & ಮುಂಗುಸಿ
ನಾಯಿ & ಬೆಕ್ಕು