ಕೆಲವರಿಗೆ ಮುರಿದು ಹೋದ ದೇವರ ಫೋಟೋಗಳು ಏನು ಮಾಡಬೇಕು ಎಂಬುದೇ ತಿಳಿಯೋದಿಲ್ಲ ಹಾಗೂ ವಿಲೇವಾರಿ ಹೇಗೆ ಮಾಡಬೇಕು ಎಂಬ ವಿಷಯವೇ ಹಲವು ಜನರಿಗೆ ಗೊತ್ತಿಲ್ಲ ಸರಿಯಾದ ಕ್ರಮದಲ್ಲಿ ನಾವು ಬಳಸಿದ ದೇವರಮನೆ ಫೋಟೋಗಳನ್ನ ಹಾಕದೆ ಹೋದರೆ ಖಂಡಿತ ನಮಗೆ ದೋಷ ಉಂಟಾಗುತ್ತದೆ. ಈಗ ನಿಮಗೆ ಮನೆಯಲ್ಲಿ ನೀವು ಉಪಯೋಗಿಸಿದ ದೇವರ ಫೋಟೋಗಳು ಹೇಗೆ ವಿಲಾಬಾರಿ ಮಾಡಬೇಕು ಎಂಬುದನ್ನು ಸಂಪೂರ್ಣ ಮಾಹಿತಿಯೊಂದಿಗೆ ನಿಮ್ಮ ಬಳಿ ಚರ್ಚಿಸಲಿದ್ದೇವೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಲ್ಲರ ಮನೆಯಲ್ಲೂ ಫೋಟೋಗಳನ್ನು ಇಟ್ಟುಕೊಳ್ಳಬೇಕು ಎಂಬ ವಾಡಿಕೆ ಇದೆ ನಾವು ಹುಟ್ಟಿದಾಗಿನಿಂದ ಮನೆಯಲ್ಲಿ ದೇವರ ಫೋಟೋಗಳನ್ನ ನೋಡಿರುತ್ತೇವೆ ಇನ್ನು ಕೆಲವು ಕ್ಯಾಲೆಂಡರ್ ಗಳು ಪುಸ್ತಕಗಳ ಮೇಲು ಸಹ ದೇವರ ಫೋಟೋಗಳನ್ನ ಹಾಕಿರುತ್ತಾರೆ ಅಂತಹ ಪೂಜೆ ಮಾಡುವಂತಹ ದೇವರ ಫೋಟೋಗಳು ಕೆಲವೊಮ್ಮೆ ನೀವು ಗಮನಿಸಿದರೆ ಗೊತ್ತಿರುತ್ತೆ ರೋಡಿನ ಮೇಲೆ ರೋಡಿನ ಅಕ್ಕಪಕ್ಕ ಬಿದ್ದಿರುತ್ತವೆ ಕೆಲವರು ಮನೆಯಲ್ಲಿ ಪೂಜೆ ಮಾಡಿದ ಫೋಟೋಗಳನ್ನ ತೆಗೆದುಕೊಂಡು ಹೋಗಿ ರೋಡಿನ ಬದಿಯಲ್ಲಿ ಎಸೆದಿರುತ್ತಾರೆ. ಈ ರೀತಿ ಮಾಡುವುದು ತುಂಬಾ ತಪ್ಪು. ನಾವು ಮನೆಯಲ್ಲಿ ಪೂಜೆ ಸಾಮಾನುಗಳನ್ನ ಅನೇಕ ದೇವರು ಕಾರ್ಯಕ್ಕೆ ಬಳಸಿದ ವಸ್ತುಗಳನ್ನ ಎಲ್ಲಿಂದರಲ್ಲಿ ಬಿಸಾಕಿರುತ್ತೇವೆ ಆದರೆ ಪೂಜೆಗೆ ಬಯಸಿದ ಅಮೂಲ್ಯ ವಸ್ತುಗಳನ್ನ ಹೀಗೆ ಮನೆಯಲ್ಲಿ ಬಿಸಾಕಬಾರದು ಇವುಗಳನ್ನ ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡುವುದು ಅವಶ್ಯ ಅದನ್ನ ನಮಗೆ ನಮ್ಮ ಹಿರಿಯರು ತಿಳಿಸಬೇಕಾದದ್ದು ಕರ್ತವ್ಯ ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಜನರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ ಆ ಕಾರಣಕ್ಕಾಗಿ ನಾವು ಇಲ್ಲಿ ಹಿಂದೂಗಳ ಸಂಪ್ರದಾಯದಲ್ಲಿ ಹೇಗೆ ಬಳಸಿದ ದೇವರ ಫೋಟೋಗಳು ವಿಸರ್ಜಿಸಬೇಕು ಎಂಬುದು ತಿಳಿದಿರಬೇಕು ನಾವು ಹಬ್ಬದ ದಿನಗಳಲ್ಲಿ ಉದಾಹರಣೆಗೆ ದೀಪಾವಳಿ ಗಣೇಶ ಚತುರ್ಥಿ ದುರ್ಗಾ ಪೂಜೆ ಸರಸ್ವತಿ ಪೂಜೆಗಳಂತ ಹಬ್ಬಗಳನ್ನು ಆಚರಿಸುವಾಗ ವಿಗ್ರಹಗಳನ್ನು ಬಳಸುತ್ತೇವೆ ಇವೆಲ್ಲ ಮಣ್ಣಿನಲ್ಲಿ ಅಥವಾ ಗಾಜು ಹಾಗು ಫೋಟೋಗಳ ಮಾದರಿಯಲ್ಲಿ ಮನೆಯಲ್ಲಿ ಇಟ್ಟುಕೊಂಡಿರುತ್ತೇವೆ ದೇವರ ಕಾರ್ಯ ಮುಗಿದ ನಂತರ ಅವನ ಎಲ್ಲಿಂದರಲ್ಲಿ ಬಿಸಾಕುತ್ತೇವೆ.
ಹೂಗಳನ್ನು ವಿಸರ್ಜಿಸುವ ಕ್ರಮ
ನಾವು ದೇವರ ಪೂಜೆಯನ್ನ ಮಾಡುವಾಗ ಮೂರ್ತಿಗಳಿಗೆ ಸುಂದರವಾದ ಹೂಗಳನ್ನ ಪ್ರತಿನಿತ್ಯವೂ ಬಳಸುತ್ತೇವೆ ಉತ್ಪತ್ತಿಯಾಗುತ್ತಿರುವ ಹೂಗಳ ಕಸ ತುಂಬಾ ಹೆಚ್ಚಾಗುತ್ತಿದೆ ಇದನ್ನ ಬಹಳ ಸುಲಭವಾಗಿ ನಮ್ಮ ಪೂರ್ವಜರು ಹೇಗೆ ಮನೆಯಿಂದ ಹೊರಗಡೆ ಹಾಕಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದರು ಅಥವಾ ಒಣಗಿದ ದೇವರಿಗೆ ಪೂಜೆಗೆ ಬಳಸಿದ ಹೂಗಳನ್ನ ಅರಳಿ ಮರ ಬುಡಕ್ಕೆ ಹಾಕುತ್ತಿದ್ದರು ಇನ್ನೂ ಕೆಲವರು ಮನೆಯ ಮುಂದೆ ಇರುವ ತೆಂಗಿನ ಮರಕ್ಕೆ ಹಾಕುತ್ತಿದ್ದರು ಇನ್ನು ದೇವಸ್ಥಾನಗಳಲ್ಲಿ ಪೂಜೆಗೆಂದು ಪ್ರತಿದಿನ ಪವಿತ್ರ ಹೂಗಳನ್ನ ಬಳಸುತ್ತಾರೆ. ಇದನ್ನ ಖಂಡಿತ ಯಾರು ತುಳಿಯಲು ಇಷ್ಟಪಡುವುದಿಲ್ಲ ಇಂತಹ ಸಂದರ್ಭದಲ್ಲಿ ಪೂಜೆ ಮಾಡುವ ಪೂಜಾರರು ಪಕ್ಕದಲ್ಲಿ ಎಲ್ಲಾದರೂ ಹರಿಯುತ್ತಿರುವ ನದಿಗೆ ಅಥವಾ ಕಾಲುವೆಗೆ ತೆಗೆದುಕೊಂಡು ಹೋಗಿ ಹೂಗಳನ್ನ ಹಾಕುತ್ತಿದ್ದರು ಈ ರೀತಿ ಮಾಡುವುದರಿಂದ ಪ್ರಕೃತಿಗೂ ಸಹ ಏನೇ ತೊಂದರೆ ಆಗುವುದಿಲ್ಲ ಜೊತೆಗೆ ನಮ್ಮಲ್ಲಿರುವ ಹೂಗಳ ಮೇಲಿನ ಪವಿತ್ರ ಭಾವನೆ ಹಾಗೆ ಉಳಿಯುತ್ತದೆ.
ದೇವರ ಫೋಟೋಗಳನ್ನ ವಿಸರ್ಜಿಸುವ ಕ್ರಮ
ಮನೆಯಲ್ಲಿ ದೇವರ ಮನೆಯಲ್ಲಿ ಬಳಸಿದ ಫೋಟೋಗಳನ್ನ ದೇವರು ಎಂದು ಪರಿಗಣಿಸಿರುತ್ತೇವೆ ಅವುಗಳನ್ನ ಎಲ್ಲೆಂದರಲ್ಲಿ ಎಸೆಯುವುದು ತುಂಬಾ ತಪ್ಪು. ಹಾಗಾಗಿ ಬೆಂಕಿಯನ್ನು ನಾವು ಪಂಚಭೂತಗಳಲ್ಲಿ ಒಂದು ಎಂದು ಪರಿಗಣಿಸುತ್ತೇವೆ ಹಾಗಾಗಿ ಬಳಸಿದ ದೇವರ ಫೋಟೋಗಳನ್ನ ನೀವು ಬೆಂಕಿಯಲ್ಲಿ ಹಾಕಬಹುದು.
ಮುರಿದುಹೋದ ದೇವರ ವಿಗ್ರಹಗಳ ವಿಸರ್ಜಿಸುವ ಕ್ರಮ
ಹಲವು ಕಾರಣಗಳಿಗೆ ದೇವರಮನೆಯ ಮೂರ್ತಿಗಳು ವಿರೂಪ ಗೊಳ್ಳುತ್ತವೆ ಅವುಗಳನ್ನು ನಮ್ಮ ಹಿಂದೂ ಪ್ರಕಾರದಲ್ಲಿ ಪೂಜಿಸುವಂತಿಲ್ಲ ಹಾಗಾಗಿ ಏನು ಮಾಡುವುದು ಎಂಬ ಭಾವನೆ ನಮ್ಮೆಲ್ಲರಿಗೂ ಮೂಡುತ್ತದೆ ಕೆಲವರು ಎಲ್ಲೆಂದರಲ್ಲಿ ಬಿಸಾಕುತ್ತಾರೆ ಈ ರೀತಿ ಮಾಡಬಾರದು ಏಕೆಂದರೆ ಪವಿತ್ರವಾಗಿ ಬಳಸಿದ ವಿಗ್ರಹಗಳು ದೇವರ ಸಮ ಹಾಗಾಗಿ ಇವುಗಳನ್ನ ಬಾವಿಯಲ್ಲಿ ಹಾಕಬಹುದು ಅಥವಾ ಕೆರೆ ಸಮುದ್ರ ನದಿಗಳನ್ನು ಸಹ ನೀವು ವಿಸರ್ಜಿಸಿದರೆ ತುಂಬಾ ಉತ್ತಮ ಸ್ವಲ್ಪ ದಿನಗಳ ನಂತರ ಕರಗಿ ಹೋಗುತ್ತವೆ ಮಾಲಿನ್ಯವೂ ಸಹ ನಮಗೆ ಆಗುವುದಿಲ್ಲ ಅಕಸ್ಮಾತಾಗಿ ದೇವರ ಮೂರ್ತಿಗಳು ಪ್ಲಾಸ್ಟಿಕ್ ನಿಂದ ಆಗಿದ್ದರೆ ಬೆಂಕಿಗೆ ಹಾಕಿ ಅವನ್ನ ವಿಸರ್ಜನೆ ಮಾಡಬಹುದು ಯಾವುದೇ ರೀತಿಯಿಂದಲೂ ಮಾಲಿನ್ಯವಾಗಲಿ ಅಥವಾ ಬೇರೆಯವರಿಗೆ ತೊಂದರೆಯಾಗಲಿ ಆಗುವುದಿಲ್ಲ ಹಾಗೂ ಬಹು ಮುಖ್ಯವಾಗಿ ನಮ್ಮ ಹಿಂದೂ ಧರ್ಮದ ಜನರಿಗೆ ಧಕ್ಕೆ ಕೂಡ ಆಗೋದಿಲ್ಲ.
ಮದುವೆ ಪತ್ರಿಕೆ ಮೇಲಿರುವ ದೇವರ ಫೋಟೋಗಳ ವಿಸರ್ಜಿಸುವ ಕ್ರಮ
ಕೇವಲ ಮದುವೆ ಪತ್ರಿಕೆ ಮೇಲೆಲ್ಲ ಹಲವು ಬೋರ್ಡ್ ಗಳು ಕ್ಯಾಲೆಂಡರ್ ಪುಸ್ತಕ ದೇವರ ಪೂಜೆಗೆ ಬಳಸುವ ಸಾಮಾನುಗಳ ಗವರ್ನ ಮೇಲು ಸಹ ಮುದ್ರಿಸುತ್ತಾರೆ ಇಂತಹ ಸಂದರ್ಭದಲ್ಲಿ ನಾವು ಬಳಸಿ ಆದಮೇಲೆ ದೇವರ ಚಿತ್ರ ಇರುವ ಪೇಪರ್ಗಳನ್ನು ಕಸಕ್ಕೆ ಅಥವಾ ಎಲ್ಲೆಂದರಲ್ಲಿ ಬಿಸಾಕಬಾರದು ಏಕೆಂದರೆ ಅವುಗಳ ಮೇಲೆ ನಮ್ಮ ಹಿಂದೂ ಧರ್ಮದ ಪವಿತ್ರ ದೇವರ ಚಿತ್ರಗಳಿರುತ್ತೆ ಹಾಗೂ ನಾವು ಪ್ರತಿದಿನ ಪೂಜೆ ಮಾಡಿರುತ್ತೇವೆ ನಮಗೆಲ್ಲದೆ ಹೋದರು ಬೇರೆಯವರಿಗೆ ತುಂಬಾ ನೋವುಂಟು ಮಾಡುತ್ತೆ ನಾವು ಈ ರೀತಿ ದೇವರ ವಿಗ್ರಹಗಳು ಅಥವಾ ಫೋಟೋಗಳನ್ನು ಎಸೆಯುವುದರಿಂದ.
ಕೆಲವರು ಹೇಗೆ ವಿಚಾರಿಸಿಸಬೇಕು ಎಂಬ ಮಾಹಿತಿ ತಿಳಿಯದೆ ಈ ರೀತಿ ತಪ್ಪು ಮಾಡುತ್ತಾರೆ ಇನ್ನು ಕೆಲವರು ಕ್ರಿಯಾಶೀಲವಾಗಿ ಮನೆಯಲ್ಲೇ ಕತ್ತರಿಸಿ ಫೋಟೋ ಆಲ್ಬಮ್ ಕೂಡ ಮಾಡುತ್ತಾರೆ ಉಳಿದವರನ್ನು ಎಲ್ಲಿ ಕಸಕ್ಕೆ ಸಿಗುತ್ತಾರೆ ಒಂದು ಕವರ್ ನಲ್ಲಿ ಎತ್ತಿಡಿ ಮನೆ ಅಕ್ಕ ಪಕ್ಕದಲ್ಲಿರುವ ಕೆರೆಗೆ ಹಾಕಿ ಇಲ್ಲವಾದರೆ ಹೊರಗಡೆ ಎಲ್ಲಾದರೂ ಹೋದರೆ ನದಿಯಲ್ಲಿ ನೀವು ಬಿಡಬಹುದು ಇನ್ನೂ ಪ್ರತಿಯೊಬ್ಬರಿಗೂ ಸುಲಭವಾಗಿರುವಂತಹ ಬೆಂಕಿಯಲ್ಲಿ ಹಾಕಿ ದೇವರ ಫೋಟೋಗಳನ್ನ ನಂದಿಸಬಹುದು ಪೂಜಾ ಸಾಮಗ್ರಿಗಳನ್ನು ಸಹ ಈ ರೀತಿ ಮಾಡಿದರೆ ಪ್ರಕೃತಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಹಾಗೂ ನಮ್ಮ ಹಿಂದೂ ಜನರು ನಂಬಿರುವ ಪಾವಿತ್ರತೆಗೂ ಸಹ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ ಈ ರೀತಿ ಪೂಜಾ ಸಾಮಗ್ರಿಗಳು ಅಥವಾ ದೇವರ ಫೋಟೋಗಳನ್ನ ಅತಿ ಜಾಣನೆಯಿಂದ ನೀವು ವಿಸರ್ಜಿಸಬಹುದು.