ಸಾಮಾಜಿಕ ತಾಣ ಎಂಬ ವಿಷಯ ಕಿವಿಗೆ ಬಿದ್ದೊಡನೆ ನಮ್ಮ ಮನಸ್ಸಿಗೆ ಬರುವುದು youtube kannada channels, ಹೌದು ನಾವೆಲ್ಲ ಮನೋರಂಜನೆಗಾಗಿ ಹಲವು ವರ್ಷಗಳಿಂದ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತಾ ಬಂದಿದ್ದೇವೆ ಪ್ರತಿ ದಿನ ಹಲವು ಕೋಟಿಗಟ್ಟಲೆ ಜನರು ವಿಡಿಯೋಗಳ ವೀಕ್ಷಣೆ ಮಾಡಿ ಮನರಂಜನೆ ಪಡೆಯುತ್ತಾರೆ ಇದರ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು ಅಡುಗೆ ಮಾಡಲು ಕಲಿಯುತ್ತಿರುವ ಜನರು ಡ್ರೈವಿಂಗನ್ನು ಕಲಿಯಲು ಆಸಕ್ತಿ ಇರುವ ಜನರು ಇನ್ನಿತರ ಹಲವು ಅಡ್ವಾಂಟೇಜ್ ಗಳನ್ನು ಯೂಟ್ಯೂಬ್ ಹೊಂದಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಡುವ ಈ ಯೂಟ್ಯೂಬ್ ಕೆಲವರಿಗೆ ಹಣ ಮಾಡಲು ಸಹ ಸಹಾಯ ಮಾಡುತ್ತಿದೆ ನಮ್ಮ ಕನ್ನಡದಲ್ಲೂ ಸಹ ಹಲವಾರು ಯೂಟ್ಯೂಬ್ ಚಾನೆಲ್ ಗಳಿವೆ. ಅವುಗಳಲ್ಲಿ ಉತ್ತಮ ಕಂಟೆಂಟ್ ಗಳನ್ನು ಸಹ ನೀಡುತ್ತಾ ಬಂದಿದ್ದಾರೆ ಈ ಕಾರಣಕ್ಕಾಗಿಯೇ ಇವರು ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿಕೊಳ್ಳಲು ಕಾರಣವಾಗಿದೆ.
Kannada Youtube Channels List
ಟೆಕ್ ಇನ್ ಕನ್ನಡ
ಕನ್ನಡದಲ್ಲಿ ಟೆಕ್ನಾಲಜಿಗೆ ಸಂಬಂಧಿಸಿದ ಅದರಲ್ಲೂ ಹೊಸ ಮೊಬೈಲ್ ಫೋನ್ ಕ್ಯಾಮೆರಾ ಟಿವಿ ಇನ್ನಿತರ ಗ್ಯಾಜೆಟ್ಸ್ ಗಳನ್ನು ಇವರು ಅನ್ ಬಾಕ್ಸಿಂಗ್ ಮಾಡುತ್ತಾ ಬಂದಿದ್ದಾರೆ, ಕನ್ನಡದಲ್ಲಿ ಇವರೇ ಮೊದಲು ಒಂದು ಲಕ್ಷ ಫಾಲೋವರ್ಸ್ ಅನ್ನ ಯುಟ್ಯೂಬ್ ಚಾನೆಲ್ ನಲ್ಲಿ ಪಡೆದಿದ್ದು ತುಂಬಾ ವಿಶೇಷ. ಯಾವ ಮೊಬೈಲ್ ಫೋನ್ ಗಳು ರಿಲೀಸ್ ಆದರು ಸಹ ಇವರ ಕೈಗೆ ಆ ಮೊಬೈಲ್ ಬಂದು ಸಿಗುತ್ತದೆ ಅನ್ಬಾಕ್ಸ್ ಮಾಡಿ ಅದರ ಬಗ್ಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಇವರು ತಮ್ಮ ವೀಕ್ಷಕರಿಗೆ ನೀಡುತ್ತಾ ಬಂದಿದ್ದಾರೆ ಈ ಕಾರಣಕ್ಕಾಗಿ ಇವರು ತುಂಬಾ ವಿಶೇಷ. ಇವರ ಚಾನೆಲ್ ಸುಮಾರು ಏಳು ಲಕ್ಷಕ್ಕೂ ಹೆಚ್ಚು ಚೆಂದದಾರರನ್ನು ಪಡೆದುಕೊಂಡಿದೆ ನೀವೇನಾದರೂ ಈ ಚಾನೆಲ್ ವೀಕ್ಷಣೆ ಮಾಡಬೇಕಾದರೆ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ ನೋಡಿ. ಇಂಜಿನಿಯರ್ ಆದ ಈತ ಮೊದಲು ಕೆಲಸವನ್ನು ಮಾಡುತ್ತಿದ್ದರು ಕೆಲವು ವರ್ಷಗಳ ನಂತರ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಅನ್ನು ತೆರೆದು ವಿಡಿಯೋಗಳನ್ನು ಹಾಕುತ್ತಾ ಬಂದರು ಯಾವಾಗ ಇವರಿಗೆ ಒಳ್ಳೆಯ ಹಣ ಬರಲು ಪ್ರಾರಂಭವಾಗಿದ್ದು ಆಗ ತಮ್ಮ ಎಲ್ಲಾ ಕೆಲಸವನ್ನು ಬಿಟ್ಟು ಕೇವಲ ಯೂಟ್ಯೂಬ್ ನಲ್ಲಿಯೇ ಹಣವನ್ನು ಇವರು ಗಳಿಸುತ್ತಿದ್ದಾರೆ ಈ ಕಾರಣಕ್ಕಾಗಿಯೇ ಟಿಕ್ ಇನ್ ಕನ್ನಡ ಇದೀಗ ಕರ್ನಾಟಕದಲ್ಲಿ ಟೆಕ್ನಾಲಜಿ ವಿಡಿಯೋಗಳಿಗೆ ತುಂಬಾ ಹೆಸರುವಾಸಿ.
ಮೀಡಿಯಾ ಮಾಸ್ಟರ್
ಈ ಹೆಸರು ಕೇಳಿದ ತಕ್ಷಣ ಹಲವು ಜನರಿಗೆ ಮನಸ್ಸಿನಲ್ಲಿ ಬರುವುದು ಇತಿಹಾಸ ಏಕೆಂದರೆ ಈ ಕನ್ನಡ ಯೂಟ್ಯೂಬ್ ಚಾನಲ್ನಲ್ಲಿ ಕೇವಲ ಇತಿಹಾಸಗಳಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಪ್ರಸ್ತಾಪ ಮಾಡುತ್ತಾರೆ. ಇಲ್ಲಿ ಇತಿಹಾಸದ ಜೊತೆಗೆ ಪ್ರಸ್ತುತ ದಿನದಲ್ಲಿ ನಡೆಯುತ್ತಿರುವ ವಿಷಯಗಳನ್ನು ಸಹ ಜನರ ಮುಂದೆ ಸೊಗಸಾಗಿ ಪ್ರಸ್ತುತ ಪಡಿಸುತ್ತಾರೆ ಈ ಚಾನೆಲ್ ಕೇವಲ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾಗಿದ್ದು 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನ್ನ ಹೊಂದಿದೆ ಪ್ರತಿದಿನ ಕನಿಷ್ಠ ಎರಡು ವಿಡಿಯೋಗಳನ್ನು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡುತ್ತಾರೆ ಪ್ರತಿ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದು ಜನರ ಮೆಚ್ಚುಗೆಗೆ ಕಾರಣವಾಗುತ್ತಿದೆ ಇದೆ ಈ ಚಾನಲ್ನ ವಿಶೇಷತೆ.
ವಿಡಿಯೋ ಮಾಸ್ಟರ್ ತುಂಬಾ ಫೇಮಸ್ ಆಗಲು ಕಾರಣ ಈ ಚಾನಲ್ ನ ಡೈರೆಕ್ಟರ್ ಹಾಗೂ ವಾಯ್ಸ್ ನೀಡುತ್ತಿರುವ ವ್ಯಕ್ತಿ ಇವರ ಮೊದಲು ಟಿವಿ 9 ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ತುಂಬಾ ಹೆಸರುವಾಸಿಯನ್ನು ಕಳಿಸಿದ್ದರು ತದನಂತರ ಇವರು ತಾವೇ ಒಂದು ಚಾನಲ್ ಅನ್ನು ಪ್ರಾರಂಭಿಸಿ ಜನರ ಮೆಚ್ಚುಗೆ ಪಡೆದಿದ್ದಾರೆ.
ಇಂಡಿಯನ್ ಮನಿ ಡಾಟ್ ಕಾಮ್ ಯುಟ್ಯೂಬ್ ಚಾನೆಲ್
ಯೂಟ್ಯೂಬ್ ಚಾನೆಲ್ ನಲ್ಲಿ ಕೇವಲ ಆರ್ಥಿಕತೆ ಹೇಗೆ ಫೈನಾನ್ಸಿಯಲ್ ಗ್ರೋ ಆಗುವುದು ಮತ್ತು ಲೋನ್ ಹಣ ಸಂಪಾದನೆ ಮುಂತಾದ ಆರ್ಥಿಕ ವಿಷಯಗಳನ್ನು ಮುಂದಿಟ್ಟುಕೊಂಡು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಸುಮಾರು 10 ವರ್ಷಕ್ಕೂ ಅಧಿಕ ಎಕ್ಸ್ಪೀರಿಯನ್ಸ್ ಆಗಿರುವ ಸುಧೀರ್ ಅವರು ಡೈರೆಕ್ಟರ್ ಆಗಿ ಇದನ್ನು ಕನ್ನಡದಲ್ಲಿ ಮುನ್ನಡೆಸಿಕೊಂಡು ಬಂದಿದ್ದಾರೆ ಈ ಚಾನಲ್ನಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಚಂದದಾರರಾಗಿದ್ದಾರೆ. ಜನರಿಗೆ ಬೇಕಾದ ಎಲ್ಲಾ ಬಗೆಯ ಹಾರ್ದಿಕ ಸಮಸ್ಯೆ ಕುರಿತ ವಿಡಿಯೋವನ್ನು ಇವರು ಮಾಡುತ್ತಾರೆ ಅದರಲ್ಲೂ ಪ್ರಮುಖವಾಗಿ ಯಾರು ಸಾಲ ಪಡೆದು ತೊಂದರೆಗೆ ಈಡಾಗಿದ್ದಾರೆ ಅವರಿಗೆ ಮನೋಜ್ ಧೈರ್ಯವನ್ನು ನೀಡುವ ಕೆಲಸ ಇವರು ಮಾಡಿಕೊಂಡು ಬಂದಿದ್ದಾರೆ. ಕೆಲವರು ಬ್ಯಾಂಕ್ ನಲ್ಲಿ ಲೋನ್ ಪಡೆದು ಕಟ್ಟಲಾಗದೆ ತುಂಬಾ ಕಷ್ಟ ಪಡುತ್ತಾರೆ ಇಂಥವರಿಗೆ ಈ ಚಾನಲ್ನಲ್ಲಿ ಹಲವು ವಿಡಿಯೋಗಳ ಮುಖಾಂತರ ತಮ್ಮದೇ ಶೈಲಿಯಲ್ಲಿ ವಿಶೇಷವಾಗಿ ಮಾಹಿತಿ ನೀಡುತ್ತಾ ಬಂದಿದ್ದಾರೆ ಹಲವು ಜನರು ಲೋನ್ ಪಡೆದು ಕಟ್ಟಲಾಗದೆ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ ಇಂತಹ ಸ್ಥಿತಿ ಯಾರಿಗೂ ಬರಬಾರದು ಎಂಬುವ ಉದ್ದೇಶದಿಂದ ಸುದೀಪ್ ಅವರು ಈ ಚಾನಲ್ ಅನ್ನು ತುಂಬಾ ಚೆನ್ನಾಗಿ ತಮ್ಮದೇ ಆದ ಶೈಲಿಯಲ್ಲಿ ಕಾಂಟೆಕ್ಟ್ ಗಳನ್ನು ಕ್ರಿಯೇಟ್ ಮಾಡಿ ಜನರಿಗೆ ತುಂಬಾ ಸಹಾಯ ಹಸ್ತ ನೀಡುತ್ತಿದ್ದಾರೆ.
ಮಸ್ತು ಮಗ
youtube kannada channelsನಲ್ಲಿ ಸುಮಾರು 14 ಲಕ್ಷ ಹೆಚ್ಚು ಜನ ಚಂದದಾರರಿದ್ದಾರೆ, ನಿರೂಪಕರಾದ ಅಮರ್ ಪ್ರಸಾದ್ ತುಂಬಾ ಚೆನ್ನಾಗಿ ವಿವರಣೆ ನೀಡುವ ಮುಖಾಂತರ ಜನರಿಗೆ ತಾಜಾ ವಿಷಯಗಳನ್ನು ತಲುಪಿಸುತ್ತಿದ್ದಾರೆ ಇದು ಪ್ರಮುಖವಾಗಿ ಪತ್ರಿಕೋದ್ಯಮ ರಾಜಕಾರಣ ಉದ್ಯಮದ ಬಗ್ಗೆ ಕಂಟೆಂಟ್ ಗಳನ್ನು ಮಾಡಿ ತಮ್ಮ ಚಾನಲ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.
ಕೇವಲ ಮೂರೇ ವರ್ಷದಲ್ಲಿ 14 ಲಕ್ಷ ಜನದಾರರನ್ನು ಪಡೆದ ಈ ಚಾನೆಲ್ ತುಂಬಾ ವಿಶೇಷವಾಗಿದೆ ಕಾರಣ ನಿಮಗೆಲ್ಲ ಗೊತ್ತೇ ಇದೆ ನೇರವಾಗಿ ದಿಟ್ಟ ಆನ್ಸರ್ಗಳನ್ನು ನೀಡುತ್ತಾ ಬಂದಿರುವ ಇವರು ಸಮಾಜವನ್ನು ತಿದ್ದಿ ನೀಡುವ ಕೆಲಸ ಮಾಡುತ್ತಿದ್ದಾರೆ ಅದರಲ್ಲೂ ಪಾಲಿಟಿಕ್ಸ್ ನಲ್ಲಿ ಯಾರು ಕೆಲಸ ನೀಡುತ್ತಿದ್ದಾರೆ ಅವರು ತಪ್ಪು ಮಾಡಿದಾಗ ಅವರನ್ನು ತಿದ್ದಿ ನಡೆಸುವ ಕೆಲಸ ಇವರದಾಗಿದ್ದು ತುಂಬಾ ಚೆನ್ನಾಗಿ ಈ ಚಾನೆಲ್ ಮೂಡಿ ಬರುತ್ತಿದೆ.
ಇನ್ಫೋಬೆಲ್ಸ್ ಕನ್ನಡ
ಕೇವಲ ಚಿಕ್ಕ ಮಕ್ಕಳಿಗೆ ಮುಡುಪಾದ ಈ ಯೂಟ್ಯೂಬ್ ಚಾನೆಲ್ ಹಲವು ಬಗೆಯ ಕಾರ್ಟೂನ್ ಮಕ್ಕಳ ವಿಡಿಯೋಗಳನ್ನು ನೀಡುತ್ತಾ ಬಂದಿದ್ದಾರೆ ಇವರ ಮುಖ್ಯ ಉದ್ದೇಶ ಮಕ್ಕಳನ್ನ ನಕ್ಕಿ ನಗಿಸುವುದು ಜೊತೆಗೆ ಕೆಲವು ಶಿಕ್ಷಣದ ವಿಡಿಯೋಗಳನ್ನು ಸಹ ಇವರು ನೀಡುತ್ತಿದ್ದಾರೆ ಇದು ಮಕ್ಕಳ ವಿಕಾಸಕ್ಕೆ ಖಂಡಿತ ಸಹಾಯವಾಗಲಿದೆ ಈ ಚಾನಲ್ನಲ್ಲಿ 80 ಲಕ್ಷಕ್ಕೂ ಅಧಿಕ ವೀಕ್ಷಕರನ್ನ ಹೊಂದಿದೆ ಕೆಲವು ಮಕ್ಕಳಂತೂ ಇದರ ಫ್ಯಾನ ಆಗಿಬಿಟ್ಟಿದ್ದಾರೆ ಇದರಲ್ಲಿರುವ ಎಲ್ಲಾ ವಿಡಿಯೋಗಳನ್ನು ನೋಡುತ್ತಾ ಊಟ ಮಾಡುವುದು ಆಟ ಆಡುವುದು ಯಾವಾಗ ಮಕ್ಕಳು ಅಳುತ್ತವೆ ಆಗ ಈ ವಿಡಿಯೋಗಳನ್ನು ತೋರಿಸಿದರೆ ಸಾಕು ಮಕ್ಕಳು ಅಳುವುದನ್ನು ನಿಲ್ಲಿಸಿ ಬಿಡುತ್ತವೆ.
ಕನ್ನಡ ಕಾಮಿಡಿ ಸೀನ್ಸ್
ನೀವು ಕನ್ನಡದಲ್ಲಿ ಯಾವುದೇ ಕಾಮಿಡಿ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದರೆ ಅದರಲ್ಲಿ ಬರುವಂತಹ ವಿಡಿಯೋಗಳೆಲ್ಲ ಆದಷ್ಟು ಕನ್ನಡ ಕಾಮಿಡಿ ಸೀನ್ಸ್ ಚಾನೆಲ್ನದೆ ಆಗಿರುತ್ತದೆ ಕಾರಣ ಇವರು ಹಲವು ವರ್ಷಗಳಿಂದ ಎಲ್ಲಾ ಬಗೆಯ ಕನ್ನಡ ಸಿನಿಮಾದ ಹಾಸ್ಯ ಪ್ರಸಂಗಗಳನ್ನು ಕಟ್ ಮಾಡಿ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಾಕಿಕೊಂಡು ಬಂದಿದ್ದಾರೆ ಈ ಚಾನಲ್ ಅನ್ನು sgv ಪ್ರೊಡಕ್ಷನ್ ಸಂಸ್ಥೆ ಮುನ್ನಡೆಸಿಕೊಂಡು ಬರುತ್ತಿದೆ ಇದಕ್ಕೆ ಈಗ 12 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡಿಕೊಂಡು ಬಂದಿದ್ದಾರೆ. ಕನ್ನಡದಲ್ಲಿ ಯಾವುದೇ ಆಸೆ ಪ್ರಸಂಗಗಳ ಸರ್ಚ್ ಮಾಡಿದರು ಈ ಚಾನಲ್ನದ್ದೇ, ಬರಬಾರದು ಇದು ನಮ್ಮ ಕನ್ನಡಿಗರ ಹೆಮ್ಮೆಯ ವಿಷಯ.
ವಿಸ್ಮಯ ಕನ್ನಡ
ನೀವು ನಿಗೂಢ ರಹಸ್ಯ ಸಸ್ಪೆನ್ಸ್ ಕಥೆಗಳನ್ನು ಇಷ್ಟಪಡುತ್ತಿದ್ದರೆ ಖಂಡಿತವಾಗಿಯೂ ಈ youtube kannada channels ಅನ್ನು ವೀಕ್ಷಣೆ ಮಾಡಬಹುದು ಕಾರಣ ಇಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಬಗೆಯ ವಿಷಯಗಳನ್ನ ಪ್ರಸ್ತಾಪ ಮಾಡುತ್ತಾರೆ ಹಾಗೂ ಅದಕ್ಕೆ ಪರಿಹಾರ ಸಹ ಇವರು ನೀಡುತ್ತಾರೆ ಯಾವುದೋ ಸುಳ್ಳು ಯಾವುದೋ ಸರಿ ಎಂಬ ವಿಷಯಗಳನ್ನು ಇವರು ಜನರಿಗೆ ತಲುಪಿಸುತ್ತಾ ಬಂದಿದ್ದಾರೆ ಈ ಕಾರಣಕ್ಕಾಗಿ ಈ ಚಾನಲ್ ತುಂಬಾ ಹೆಸರುವಾಸಿ ಕನ್ನಡದಲ್ಲಿ ಇದಕ್ಕೆ ಸುಮಾರು ಐದು ಲಕ್ಷ ಚೆಂದದಾರರು ಇದ್ದಾರೆ ನೀವೇನಾದರೂ ಬಿಡುವಿನ ವೇಳೆಯಲ್ಲಿ ವಿಸ್ಮಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಅಥವಾ ಕಥೆಗಳನ್ನು ನೋಡುವ ಆಸಕ್ತಿ ಹೊಂದಿದ್ದಲ್ಲಿ ಖಂಡಿತವಾಗಿಯೂ ಈ ಚಾನಲ್ ಅನ್ನು ವೀಕ್ಷಿಸಬಹುದು.
ಗೌರೀಶ್ ಅಕ್ಕಿ ಯೂಟ್ಯೂಬ್ ಕನ್ನಡ
ಈ ಚಾನಲ್ ಕೂಡ ಇತ್ತೀಚಿಗೆ ಹೆಸರುವಾಸಿ ಪಡೆಯುತ್ತಿದೆ ಕಾರಣ ಗೌರೀಶ್ ಅಕ್ಕಿ ಅವರು ಮೊದಲು ಟಿವಿ ನೈನ್ ಆಂಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಇದೀಗ ಕಳೆದು ೨ ವರ್ಷಗಳಿಂದ ತಮ್ಮದೇ ಆದ ಚಾನಲ್ ಅನ್ನು ತೆರೆದು ಪೊಲೀಸ್ ಸ್ಟೋರಿಗಳನ್ನ ಅಪ್ಲೋಡ್ ಮಾಡಿಕೊಂಡು ಬಂದಿದ್ದಾರೆ. ನೇರವಾಗಿ ಪೊಲೀಸರನ್ನು ಕರೆದು ತಮ್ಮ ಚಾನಲ್ ನಲ್ಲಿ ಕಥೆಗಳನ್ನು ಹೇಳಿಸುವ ಇವರು ತುಂಬಾ ಇತ್ತೀಚಿನ ದಿನಗಳಲ್ಲಿ ಹೆಸರುವಾಸಿ.
ಅತಿ ಹೆಚ್ಚಾಗಿ ಅಂಡರ್ವರ್ಲ್ಡ್ ಗೆ ಸಂಬಂಧಿಸಿದ ವಿಷಯಗಳನ್ನೇ ಈ ಚಾನಲ್ ನಲ್ಲಿ ಪ್ರಸ್ತಾಪ ಮಾಡುತ್ತಾರೆ ಜೊತೆಗೆ ಜನರಿಗೆ ಅರಿವು ಮೂಡಿಸುವಂತಹ ಕೆಲವು ಸರ್ಕಾರದ ಕಾನೂನುಗಳು ಹಾಗೂ ಪೊಲೀಸರ ಕರ್ತವ್ಯ ಹೇಗಿರುತ್ತದೆ ಕೋರ್ಟಿನಲ್ಲಿ ನಡೆಯುವ ಕೆಲವು ಕೇಸ್ ಗಳ ಬಗ್ಗೆ ಪ್ರಸ್ತಾಪಿಸುವ ಕರ್ತವ್ಯವನ್ನು ಈ ಚಾನೆಲ್ ನಿರ್ದೇಶಕ ಗೌರೀಶ್ ಅಕ್ಕಿ ಚೆನ್ನಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ.