ನಮ್ಮ ಪೂರ್ವಜರು ಹಲವು ಔಷಧಿ ಸಸ್ಯಗಳ ಹೆಸರು ಮತ್ತು ಉಪಯೋಗಗಳು ಏನೆಂದು ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದರು. ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವ ನಮ್ಮ ದೇಶ ಹಲವು ರೋಗಗಳನ್ನ ಆಯುರ್ವೇದಿಕ್ ಔಷಧಗಳನ್ನ ಬಳಸಿಕೊಂಡು ಪರಿಹಾರ ಮಾಡಿ ಕೊಳ್ಳುತ್ತಿದ್ದರು. ಕೆಲವು ವರ್ಷಗಳಿಂದ ಇಂಗ್ಲಿಷ್ ಔಷಧಿಯನ್ನು ಬಳಸಿಕೊಂಡು ರೋಗಗಳನ್ನ ನಾವು ವಿವರಣೆ ಮಾಡಿಕೊಳ್ಳುತ್ತಿದ್ದೇವೆ ಆದರೆ ನಮ್ಮ ಮನೆಯಲ್ಲಿ ಸಿಗುವ ಹಲವು ಸಸ್ಯಗಳನ್ನ ಬಳಸಿಕೊಂಡು ನಾವು ನಮಗೆ ಬರುವ ಸಣ್ಣಪುಟ್ಟ ಕಾಯಿಲೆಯನ್ನು ನಿವಾರಿಸಿಕೊಳ್ಳಬಹುದು. ನಮ್ಮ ಮನೆಯಲ್ಲೇ ಹಲವು ಔಷಧಿಗಳು ಇದ್ದರೂ ಸಹ ನಮಗೆ ಅದರ ಬಳಕೆ ಹೇಗೆ ಮಾಡಬೇಕೆಂದು ಗೊತ್ತಿಲ್ಲ ಹಾಗಾಗಿ ಸಣ್ಣಪುಟ್ಟ ಕಾಯಿಲೆಗಳು ಬಂದಾಗಲೆಲ್ಲ ಔಷಧವನ್ನು ಪಡೆದುಕೊಳ್ಳಲು ಆಸ್ಪತ್ರೆಗೆ ಹೋಗುತ್ತೇವೆ ಈ ಕಾರಣದಿಂದಾಗಿ ನಾವು ನಿಮಗೆ ಮನೆಯಲ್ಲೇ ಸಿಗುವ ಸಣ್ಣಪುಟ್ಟ ಔಷಧಿಗಳನ್ನ ಬಳಸಿಕೊಂಡು ಹೇಗೆಲ್ಲಾ ನೀವು ಸಣ್ಣಪುಟ್ಟ ಕಾಯಿಲೆಗಳನ್ನು ನಿವಾರಣೆ ಮಾಡಿಕೊಳ್ಳಬೇಕು. ಎಂಬುದನ್ನ ಸಂಪೂರ್ಣ ವಿವರವಾಗಿ ತಿಳಿಸಿಕೊಡಲಿದ್ದೇವೆ.
ನಿಮಗೆ ಗೊತ್ತಿರಬೇಕು ನಾವೆಲ್ಲ ಮನೆಯಲ್ಲಿ ಕೆಲವೊಂದು ಗಿಡವನ್ನು ಬೆಳೆಸಿಕೊಳ್ಳುತ್ತೇವೆ ಉದಾಹರಣೆಗೆ ತುಳಸಿ ಸಸ್ಯ ಈ ಸಸಿ ಬಳಸಿಕೊಂಡು ಹಲವು ಕಾಯಿಲೆಗಳಿಗೆ ನಿವಾರಣೆಯನ್ನು ಪಡೆದುಕೊಳ್ಳಬಹುದು ಈ ಕಾರಣದಿಂದಾಗಿಯೇ ನಮ್ಮ ಪೂರ್ವಜರು ಪ್ರತಿಯೊಂದು ಮನೆಯಲ್ಲೂ ಸಹ ಈ ಗಿಡವನ್ನು ಬೆಳೆಸಬೇಕು ಎಂದು ವಾಡಿಕೆ ಮಾಡಿಕೊಂಡಿದ್ದರು.
ತುಳಸಿ ಗಿಡ
ಹಿಂದಿನ ಕಾಲದಲ್ಲಿ ತುಳಸಿ ಗಿಡವನ್ನು ಮನೆಯ ಮುಂದೆ ಹಾಕಿ ಪ್ರತಿದಿನ ಪೂಜೆ ಮಾಡುತ್ತಿದ್ದರು ಜೊತೆಗೆ ತುಳಸಿ ಗಿಡದ ಎಲೆಯನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಜಗಿದು ತಿನ್ನುತ್ತಿದ್ದರು ಹೀಗೆ ಮಾಡುವುದರಿಂದ ಬಾಯಲ್ಲಿ ಇರುವ ಕೀಟಗಳು ಸಾಯುತ್ತವೆ ಅದು ಖಂಡಿತ ನಿವಾರಣೆಯಾಗುತ್ತೆ ಜೊತೆಗೆ ನಿಮಗೆ ಹುಮನಿಟಿ ಪವರನ್ನು ತುಳಸಿ ಗಿಡದ ಬಳಕೆ ಮಾಡುವುದರಿಂದ ದೊರಕುತ್ತದೆ. ಈ ಕಾರಣದಿಂದಾಗಿ ನೀವು ಗಮನಿಸಬಹುದು ಹಳ್ಳಿಯಲ್ಲಿ ಪ್ರತಿಯೊಂದು ಮನೆ ಮುಂದೆ ಈ ತುಳಸಿ ಗಿಡದ ಸಸ್ಯವನ್ನು ನೀವು ಕಾಣುತ್ತೀರಿ ಇತ್ತೀಚಿಗೆ ಇದರ ಬಳಕೆ ಮಾಡುವುದು ತುಂಬಾ ಕಡಿಮೆಯಾಗಿದೆ ಮನೆ ಮುಂದೆ ಸಸ್ಯ ಇದ್ದರೂ ಸಹ ಇದರ ಬಳಕೆ ಹೇಗೆ ಮಾಡಿಕೊಳ್ಳಬೇಕೆಂದು ಹಲವು ಜನರಿಗೆ ಗೊತ್ತಿಲ್ಲ ಈ ಕಾರಣದಿಂದಾಗಿಯೇ ಇದರ ಖ್ಯಾತಿ ಇತ್ತೀಚಿನ ಕಾಲದಲ್ಲಿ ತುಂಬಾ ಕಡಿಮೆಯಾಗುತ್ತಾ ಬರುತ್ತಿದೆ.
ಬೇವಿನ ಗಿಡ
ಇದರ ಬಳಕೆ ಸಹ ಇತ್ತೀಚಿನ ದಿನದಲ್ಲಿ ತುಂಬಾ ಕಡಿಮೆಯಾಗುತ್ತಿದೆ ಇದಕ್ಕೆ ಮುಖ್ಯ ಕಾರಣ ಇದರ ಬಗ್ಗೆ ಇರುವ ಮಾಹಿತಿ ಕೊರತೆ ಇಂದಿನ ಕಾಲದಲ್ಲಿ ನಮ್ಮ ತಾತ ಅಜ್ಜಿ ಎಂದರಿಗೆ ಈ ಗಿಡದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿತ್ತು ಹಾಗಾಗಿ ಅವರು ಅನೇಕ ರೀತಿಯಲ್ಲಿ ಈ ಬೇವಿನ ಗಿಡದ ಬಳಕೆಯನ್ನು ಮಾಡಿಕೊಳ್ಳುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಇದರ ಮಹತ್ವ ಏನೆಂದು ಬಹಳ ಜನರಿಗೆ ಗೊತ್ತಿಲ್ಲ ಈ ಕಾರಣದಿಂದಾಗಿ ಈ ಬೇವಿನ ಸಸ್ಯವನ್ನು ಇತ್ತೀಚಿನ ದಿನದಲ್ಲಿ ಯಾರು ಸಹ ಬಳಕೆ ಮಾಡುತ್ತಿಲ್ಲ ಈ ಗಿಡದ ಎಲೆಯನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಪ್ರತಿ ದಿನ ಸ್ನಾನ ಮಾಡುವಾಗ ಚೆನ್ನಾಗಿ ಹಚ್ಚಿಕೊಂಡು ಸ್ನಾನ ಮಾಡಿದರೆ ಚರ್ಮರೋಗದಂತಹ ಹಲವು ಕಾಯಿಲೆಗಳು ನಿಮ್ಮ ಬಳಿ ಸುಳಿಯೋದಿಲ್ಲ ಜೊತೆಗೆ ಈ ಬೇವಿನ ಗಿಡದ ಕಾಯಿಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ಕಾಂತಿ ಚೆನ್ನಾಗಿ ಬರುತ್ತದೆ ಜೊತೆಗೆ ಸ್ನಾನ ಮಾಡುವಾಗ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಡ್ಯಾಂಡ್ರಫ್ ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ, ಹಬ್ಬ ಆಚರಿಸುವಾಗ ಮನೆ ಮುಂದೆ ಬೇವಿನ ಗಿಡದ ಬಳಕೆಯನ್ನು ಮಾಡುತ್ತಾರೆ ಇದಕ್ಕೆ ಮುಖ್ಯ ಕಾರಣ ಅನೇಕ ಕೀಟಗಳು ನಿಮ್ಮ ಮನೆಯ ಒಳಗೆ ಬರೋದಿಲ್ಲ ಈ ರೀತಿ ಬೇವಿನ ಎಲೆಯ ರೆಂಬೆಗಳನ್ನ ಮನೆ ಮುಂದೆ ಅಥವಾ ಮನೆ ಒಳಗೆ ಬಳಸಿದ ಈ ಕಾರಣದಿಂದಾಗಿ ನಮ್ಮ ಪೂರ್ವಜರು ಪ್ರತಿ ಹಬ್ಬವನ್ನು ಆಚರಿಸುವಾಗ ಮನೆ ಬಾಗಿಲ ಮುಂದೆ ಬೇವಿನ ಗಿಡದ ಎಲೆಯನ್ನು ಹಾಕುತ್ತಿದ್ದರು. ಇನ್ನೊಂದು ಬಹು ಮುಖ್ಯವಾದ ವಿಷಯ ಏನೆಂದರೆ ನೀವು ವ್ಯವಸಾಯವನ್ನ ಮಾಡುತ್ತಿದ್ದರೆ ಈ ಗಿಡದ ಎಲೆ ಹಾಗೂ ಕಾಯಿಯನ್ನು ಕೀಟನಾಶಕವಾಗಿ ಸಹ ಬಳಸಿಕೊಳ್ಳಬಹುದು. ಬೇವಿನ ಎಲೆ ಹಾಗೂ ಬೀಜವನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಬೆರೆಸಿ ನಂತರ ಬೆಳೆಗಳಿಗೆ ಹಾಕಿದರೆ ಹಲವು ರೋಗಗಳು ಬರೋದಿಲ್ಲ.
ನಿಂಬೆ ಗಿಡ
ನಿತ್ಯ ನಾವು ಹಲವು ಆಹಾರ ತಯಾರಿಕೆ ಮಾಡಲು ಈ ನಿಂಬೆಹಣ್ಣಿನ ಗಿಡವನ್ನು ಬಳಸಿಕೊಳ್ಳುತ್ತೇವೆ ಇದು ತುಂಬಾ ಉಪಯೋಗಕಾರಿ ನಮ್ಮ ದೇಹದಲ್ಲಿ ಹಲವು ರೋಗಗಳನ್ನ ಬರದಂತೆ ತಡೆಯುತ್ತದೆ ಜೊತೆಗೆ ನಮ್ಮ ಹ್ಯುಮಿಡಿಟಿ ಪವರ್ ಅನ್ನು ಸಹ ಹೆಚ್ಚಿಗೆ ಮಾಡುತ್ತೆ ಹಲವು ಬ್ಯೂಟಿ ಪದಾರ್ಥಗಳನ್ನು ಸಹ ಈ ನಿಂಬೆಹಣ್ಣಿನ ರಸವನ್ನು ಬಳಸಿಕೊಳ್ಳುತ್ತಾರೆ ನೀವು ಮನೆಯಲ್ಲಿ ಕಾಂತಿಯುತ ತ್ವಚೆಯನ್ನ ಪಡೆದುಕೊಳ್ಳಬೇಕು ಎಂಬ ಆಸೆ ಇದ್ದರೆ ಪ್ರತಿದಿನ ಈ ನಿಂಬೆಹಣ್ಣಿನ ರಸವನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ತೊಳೆದುಕೊಂಡರೆ ನಿಮ್ಮ ಮುಖದ ಕಾಂತಿ ಹೆಚ್ಚಾಗುತ್ತದೆ ಹಾಗೂ ಮುಖದಲ್ಲಿ ಇರುವ ಹಲವು ಕರೆಗಳು ಸಹ ಮಾಯವಾಗುತ್ತೆ.
ಲೋಕಸರ ಗಿಡ
ಇದರ ಬಗ್ಗೆ ಹಲವು ಜನರಿಗೆ ಸಾಕಷ್ಟು ಮಾಹಿತಿ ಇವೆ ಏಕೆಂದರೆ ಹಲವು ಬ್ಯೂಟಿ ಪ್ರಾಡಕ್ಟ್ಸ್ ಗಳನ್ನ ತೆರಿಕೆ ಮಾಡಲು ಈ ಲೋಕಸರ ಗಿಡವನ್ನು ಬಳಸಿಕೊಳ್ಳುತ್ತಾರೆ ನೀವು ಹಲವು ಮುಖಕ್ಕೆ ಹಚ್ಚಿಕೊಳ್ಳುವ ಕ್ರೀಮ್ಗಳಲ್ಲಿ ನೋಡಿದರೆ ಗಮನಿಸಿದರೆ ತಿಳಿಯುತ್ತೆ ಅದರ ಮೇಲೆ ಈ ಲೋಕಸರ ಗಿಡದ ಚಿತ್ರವನ್ನು ಹಾಕಿರುತ್ತಾರೆ ಹಲವು ಬ್ಯೂಟಿ ಪ್ರೊಡಕ್ಟ್ಸ್ ಗಳನ್ನ ತಯಾರಿಕೆ ಮಾಡಲು ಈ ಲೋಕಸರ ಗಿಡದ ಲೋಳೆಯನ್ನ ಬಳಸಿಕೊಳ್ಳಲಾಗುತ್ತದೆ ಇದಕ್ಕೆ ಮುಖ್ಯ ಕಾರಣ ಇದರಲ್ಲಿ ಬಹಳಷ್ಟು ಆಯುರ್ವೇದಿಕ್ ಗುಣವನ್ನು ಹೊಂದಿದೆ ಇದನ್ನ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ ಜೊತೆಗೆ ಮುಖದಲ್ಲಿ ಇರುವ ಹಲವು ಪ್ರಾಬ್ಲಂ ಗಳು ಉದಾಹರಣೆಗೆ ಸೊಕ್ಕು ಹಿಡಿದಿರುವುದು ಕಲೆಗಳು ಸೂರ್ಯನ ಶೇಡ್ ಆಗಿರುವುದು ಇಂತಹ ಸಣ್ಣಪುಟ್ಟ ತೊಂದರೆಗಳು ದೂರ ಆಗುತ್ತವೆ ಈ ಕಾರಣಕ್ಕಾಗಿ ನೀವು ಮನೆಯಲ್ಲೇ ಈ ಲೋಕಸರ ಗಿಡವನ್ನು ಸಣ್ಣ pot ನಲ್ಲಿ ಬೆಳೆಸಬಹುದು ಹಾಗೂ ಪ್ರತಿದಿನ ನಿಮ್ಮ ಮುಖಕ್ಕೆ ಹಚ್ಚಿಕೊಂಡು ಕಾಂತಿಯುತ ತ್ವಚೆಯನ್ನ ಸಹ ಪಡೆದುಕೊಳ್ಳಬಹುದು ಕೆಲವರು ಈ ಗಿಡದ ಲೋಳೆಯನ್ನ ಆಹಾರ ತಯಾರಿಕೆಯಲ್ಲೂ ಸಹ ಬಳಕೆ ಮಾಡುತ್ತಾರೆ ಈ ರೀತಿ ಮಾಡುವುದರಿಂದ ಹಲವು ಕಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ.